ಮಿಡಿಯುತ್ತಿರುವ ಹೃದಯವು ನಿನ್ನ ಹೆಸರು ನುಡಿಯಿತು ನೀನು ಇರದೆ ಉಳಿಯಲಾರೆ ಎಂಬ ಸತ್ಯ ತಿಳಿಸಿತು
ಕಣ್ಣ್ ರೆಪ್ಪೆ ಅಂಚಲ್ಲಿ ಹುಟ್ಟಿದ ಈ ಪ್ರೀತಿ ಕಣ್ಣ್ ಮಿಡಿಯೊತನಕ ಹೃದಯದಲ್ಲಿ ಹುಟ್ಟಿದ ಈ ಪ್ರೀತಿ ನನ್ನ್ ಹೃದಯದ ಬಡಿತ ನಿಲ್ಲೋ ತನಕ
ನನ್ನ ಹೃದಯ ಬಡಿತ ಕೇಳು ಗೆಳತಿ
ನನ್ನ ಉಸಿರು ನಿಲ್ಲುವ ಮೊದಲೇ
ನನ್ನ ಹೃದಯದ ಬಡಿತದಲ್ಲಿ
ನಿನ್ನ ಹೆಸರನೇ ಪಿಸುಗುಡುವುದು
ನನ್ನ ಹೃದಯದ ಬಡಿತ ಕೇಳಿದ ಕ್ಷಣವೇ
ಸೋತು ಶರಣಾಗುವೆ ನನ್ನ ಪ್ರೀತಿಗೆ...
ಸಿಕ್ಕರು ಸಿಗದ ನನ್ನಸಿರು ನೀನು
ಕಂಡರು ಕಾಣದ ಕನಸು ನೀನು
ಬದುಕಲ್ಲಿ ಬಣ್ಣ ತುಂಬಿದ ಸೊಗಸಾದ
ಪ್ರೀತಿಯ ಚಿತ್ತಾರ ನೀನು
ನನ್ನ ಹೃದಯದ ಬಡಿತ ನೀನು ...
ನಿನ್ನನ್ನೇ ಹುಡುಕುವ ಕಣ್ಣು ಹೇಳುತ್ತೆ ನೀನಂದ್ರೆ ನನಗಿಷ್ಟ ಎಂದು ನಿನ್ನನ್ನೇ ನೆನೆಸುವ ಮನಸ್ಸು ಹೇಳುತ್ತೆ ನೀನೇ ನನ್ನ ಪ್ರೀತಿ ಎಂದು ನಿನ್ನಗಾಗಿ ಮಿಡಿಯುವ ಹೃದಯ ಹೇಳುತ್ತೆ ನೀನೇ ನನ್ನ ಪ್ರಾಣ ಎಂದು...
ಬರೀ ದೇಹ ನಾನು ನನ್ನುಸಿರು ನೀನು ಕಣ್ಣು ನೀನು ಕಣ್ಣರೆಪ್ಪೆ ನಾನು ಹೃದಯ ನಾನು ಅದರೊಳಗಿನ ಬಡಿತ ನೀನು ಈ ಬರಡು ಭೂಮಿಯಲ್ಲಿ ನೀನಿಲ್ಲದೆ ನಾನು ನೀರಿಲ್ಲದ ಮೀನು...
No comments:
Post a Comment