ಮುಗ್ಧ ಪ್ರೇಮಿಗಳು


ಕಳೆದು ಹೋದ ಪ್ರೀತಿನ ಮತ್ತೆ ಮತ್ತೆ ಬಯಸುತ್ತಿದ್ದೇನೆ ಎಂದರೆ ಬೇರೆ ಪ್ರೀತಿ ಸಿಕ್ಕಿಲ್ಲ ಅಂತ ಅಲ್ಲ ಕಣೆ ಈ ಜೀವಕ್ಕೆ ನಿನ್ನಷ್ಟು ಪ್ರೀತಿಸುವವರು ಸಿಕ್ಕಿಲ್ಲ ಅಂತ




ನಿನ್ನ ಮುಂಗುರುಳ ಮಂದಮಾರುತ ನಾನಾಗುವೆ 
ನಿನ್ನ ಕೆಂದುಟಿಯ ಮಂದಹಾಸ ನಾನಾಗುವೆ 
ನಿನ್ನ ಕೈ ಬಳೆಯ ಝೇಂಕಾರ ನಾನಾಗುವೆ 
ನಿನ್ನ ಕಾಲ್ಗೆಜ್ಜೆಯ ನಿನಾದ ನಾನಾಗುವೆ 
ನೀ  ನನ್ನ ಸಂಗೀತವಾಗುವೆಯಾ
ನಾ ನಿನ್ನ ಸಂಗಾತಿಯಾದರೆ




ಪ್ರೀತಿಸಿ ನೋಡು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವೆ ಮನಸ್ಸು ಕೊಟ್ಟು ನೋಡು ಮರಣದಲ್ಲೂ ಕೂಡ ಜೊತೆಗಿರುವೆ




ಕಲೆಗಾರನ ಕಲ್ಪನೆಯ ಕೆತ್ತನೆ 
ಅಪರೂಪದ ಆ ದೇವತೆಯ ಶಿಲ್ಪ ನೀನು 
ಚಂದ್ರನ ಚೂರೊಂದು ಭೂಮಿಗೆ 
ಬಿದ್ದು ಜನಿಸಿದಂತೆ ಆ ಶಿಲ್ಪದ ರೂಪ
ನೀನು.



ನಿನ್ನ ಎದೆಯ ಅಂಗಳದ ಹಾಸಿಗೆಯ ಮೇಲೆ ನಾ ಮಲಗುವೆ ಪುಟ್ಟ ಮಗುವಿನ ಹಾಗೆ



 ನಾ ಬಯಸುವೆ ನಾ ಸತ್ತರೂ ಜಾರದಿರಲಿ ಕಂಬನಿ ನನ್ನ ಚಲುವೆ ನಿನ್ನ ಕಣ್ಣುಗಳಲ್ಲಿ ಎಂದೆಂದಿಗೂ ನಗು ತುಂಬಿರಲಿ ಸದಾ ನಿನ್ನ ಮನದಲ್ಲಿ ಚಲುವೆ 



ನಿನ್ನ ನೋಡಿದ ತಕ್ಷಣ ಎದೆ ಬಡಿತ ಹೆಚ್ಚಾಗುತ್ತೆ 
ಯಾಕೆ ನಿನ್ನ ಕಳೆದುಕೊಂಡು ಬಿಡುತ್ತೇನೆ ಅನ್ನೋ ಭಯ




ನಿನ್ನನ್ನು ಚಿತ್ರಿಸಲು ವರ್ಣಚಿತ್ರಕಾರನಲ್ಲ ನಾನು 
ನಿನ್ನನ್ನು ಸೃಷ್ಟಿಸಲು ಸೃಷ್ಟಿಕರ್ತನಲ್ಲ ನಾನು 
ನಿನ್ನನ್ನು ನಾಶಮಾಡಲು ನಾನು ವಿನಾಶಕನಲ್ಲ 
ನಾನು ನಿನಗೆ ಕಲಿಸಲು ಶಿಕ್ಷಕನಲ್ಲ 
ಆದರೆ ನಾನು ನಿನ್ನನ್ನು ಪ್ರೀತಿಸುವ ವ್ಯಕ್ತಿ




ನನ್ನ ಖುಷಿಯಲ್ಲಿ ನಿನ್ನ ಖುಷಿ ಕಾಣು ಎಂದು ಹೇಳುವವನಲ್ಲ ನಾನು
ನಿನ್ನ ಖುಷಿಯಲ್ಲಿ ,ನನ್ನ ಖುಷಿಯನ್ನು 
ಹುಡುಕುವವನು ನಾನು...



ನಿನ್ನ ಮುದ್ದು ಮಾತು ಚಂದ 
ನಿನ್ನ ಮುದ್ದು ನಗೆ ಚಂದ
ನಿನ್ನ ಮುದ್ದು ಕೆನ್ನೆ ಚಂದ 
ನೀನು ಮಾಡೋ ಮುದ್ದು 
ಪ್ರೀತಿಯ ಚಂದ ಕಣೇ...



ಮನದ ಮಂದಿರದಲ್ಲಿ ಬೆಳಗಿನ
ಪ್ರೀತಿಯ ದೀಪ ನೀನು
ಹೃದಯ ಸಮುದ್ರ ದಲ್ಲಿ ನನ್ನ
ಪ್ರೀತಿಯ ಮುತ್ತು ನೀನು.
ಕಣ್ಣ ಕೊಳದಲ್ಲಿ ಅರಳಿದ 
ಪ್ರೀತಿಯ ಪುಷ್ಪ ನೀನು....




ನನ್ನ ಹೃದಯ ನಿನ್ನ ಹೃದಯ 
ಎರಡು ವಿಷಯ
ನನ್ನ ಮನಸ್ಸು ನಿನ್ನ ಮನಸ್ಸು 
ನೂರಾರು ಕನಸ್ಸು
ಅದ್ರೆ ಒಂದೇ ಮಾತು ನೀ ನನ್ನ 
ಕಡಲ ಮುತ್ತು....






ಕಣ್ಣು ಮುಚ್ಚುವ ತನಕ ಮಾತು ಮೌನವಾಗುವ ತನಕ ಹೃದಯ ಮಿಡಿಯುವ ತನಕ ಈ ದೇಹ ಮಣ್ಣಿಗೆ ಹೋಗುವ ತನಕ ನಿನ್ನ ನನ್ನಗಿರಲಿ....



ನಗು ಬಂದರು ಅಳು ಬಂದರು ಅದು ನಿನ್ನಿಂದ  ನಿನಗಾಗಿ ಮಾತ್ರ ಯಾಕಂದ್ರೆ ಈ ಹೃದಯದ ತುಂಬಾ ನೀನೇ ತುಂಬಿರುವಾಗ ಕಣೇ


     ನೀನಂದ್ರೆ ಹುಚ್ಚು ಪ್ರೀತಿ ನನಗೆ ನಿನ್ನನ್ನ ಎಷ್ಟು ಪ್ರೀತಿಸ್ತಾ ಇದ್ದೀನಿ ಅಂದ್ರೆ ನನ್ನನ್ನ ನಾನು ಮರೆಯುವಷ್ಟು ನನ್ನಲ್ಲಿ ನಾನು ಇಲ್ಲದೆ ಇಲ್ಲದಷ್ಟು ನಿನಗಾಗಿ ನಾನು ಜೀವಿಸುವಷ್ಟು...



ನಿನ್ನ ಪ್ರೀತಿಯಲ್ಲದೇ ಬೇರೆನು ಬೇಡ ಈ ಜೀವಕ್ಕೆ ನಿನ್ನ ನಗುವಲ್ಲದೆ ಮತ್ತಾವ ಬಯಕೆಯೂ ಇಲ್ಲ ಈ ಜೀವಕ್ಕೆ....



ನೋಡು ಗೆಳೆತಿ ನನ್ನ ಈ ಕಣ್ಣರೆಪ್ಪೆಯು  ಸ್ವಾಗತಿಸುತ್ತಿದೆ  ನನ್ನ ಹೃದಯವನ್ನು ನೀನು ಒಮ್ಮೆ ಬಂದು ಸೇರಿಕೊ ನನ್ನ  ಈ ಹೃದಯದ ಗೂಡನ್ನು ಆಗ ನಾನು ಕಾಯುವೆ  ನನ್ನ ಈ ಕಣ್ಣಂತೆ ನಿನ್ನನ್ನು......



 ನೀ ಕಾಣುವ ಪ್ರತಿ ನೋಟವು ನನ್ನಾಗಿರಬೇಕು 
ನೀ ಆಡುವ ಪ್ರತಿ ಮಾತು ನನ್ನದಾಗಿರಬೇಕುನೀ ನಡೆಯುವ ಪ್ರತಿ ದಾರಿಯೂ ನನ್ನ ಜೊತೆಯಾಗಿರಬೇಕು...



ಎಷ್ಟೇ ಪ್ರೀತಿಸಿದರು ಸಲಾದೇನಿಸಿದೆ ಎಳೇಳು ಜನ್ಮಕೂ ನೀನೇ ನನ್ನ ಹೃದಯದ ಒಡತಿ ನನ್ನ ಪ್ರೀತಿಯ ಒಡತಿ...



ಕೋರಿಕೆ ನಿನ್ನಲ್ಲಿ ನನ್ನದೊಂದು  ಕೊನೆ ಆಸೆಯು ಒಂದೇ  ನಿನ್ನ ಜೊತೆಯಲ್ಲಿ ಬದುಕದ್ದಿದರು ಸಾಯುವಾಗ ನಿನ್ನ ಮಡಿಲಿನಲ್ಲಿ ಜೀವ ಬಿಡಬೇಕು...




            ನೀನೆ ನನ್ನ ಬಾಳ ಬೆಳಕು ಕಣೇ ನೀನೆ ನನ್ನ ಉಸಿರು ಕಣೇ ನಿನ್ನ ಹೊಳೆವ ಕಣ್ಗಳೆ ನನ್ನ ಮನಕೆ ಹಸಿರು ತಂಪು ಕಣೇ...




           ಮತ್ತೊಂದು  ಜನ್ಮಕ್ಕಾದ್ರು ನಿನ್ನ ಜೊತೆ

ಬದುಕುವ ಅದೃಷ್ಟ ಇದೆ ಈ ಜನ್ಮದಲ್ಲೇ ಈ ಕ್ಷಣವೇ

ಪ್ರಾಣ ಬಿಡುತ್ತೆನೆ....




         ಆ ಕಾಣದ ದೇವರಿಗೆ  ಕೈ ಮುಗಿದು ನಾ ಬೇಡಿದೆ ಗೆಳತಿ ಬೇರೇನೂ ನಾ ಕೇಳದೇ ನಿನ್ನನ್ನೇ ನಾ ಕೇಳಿದೆ ಗೆಳೆತಿ...



ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ  ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ  ಸಿಗೋ ಯಾರು ನೀನಾಗಿರಲ್ಲ...

No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ